ವಾಸ್ತುಪ್ರಕಾರ ಅಡುಗೆ ಕೋಣೆ ಹೀಗಿದ್ದರೆ ಆ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ.

ಮನೆಯ ದೇವರ ಕೋಣೆ, ಬೆಡ್ರೂಂ, ಅಡುಗೆ ಕೋಣೆ ಹೀಗೆ ಪ್ರತಿಯೊಂದು ಕೋಣೆಗೂ ಒಂದು ವಾಸ್ತು ಸಲಹೆಗಳಿವೆ. ಅಡುಗೆ ಕೋಣೆಯು ಮನೆಯಲ್ಲಿ ಪ್ರಮುಖವಾದ ಸ್ಥಳ. ಅಷ್ಟಕ್ಕೂ ವಾಸ್ತುಪ್ರಕಾರ ಅಡುಗೆ ಮನೆ ಯಾವ ದಿಕ್ಕಿನಲ್ಲಿ ಇರಬೇಕು ಎಂದು ನೋಡೋಣ.

* ವಾಸ್ತು ಶಾಸ್ತ್ರದ ಪ್ರಕಾರ ಪೂರ್ವದಿಂದ ದಕ್ಷಿಣಕ್ಕೆ ಮಧ್ಯಮ ಪ್ರದೇಶದಲ್ಲಿ ಅಡುಗೆ ಮನೆಯಿದ್ದರೆ ಒಳ್ಳೆಯದು. ಅಡುಗೆ ಮನೆಗೆ ಸೂರ್ಯನ ಬೆಳಕು ಚೆನ್ನಾಗಿ ಬೀಳುವಂತಿರಬೇಕು. ಅಡುಗೆಮನೆಯಲ್ಲಿ ಪೂರ್ವಕ್ಕೆ ಎದುರಾಗಿ ನಿಂತು ಅಡುಗೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುವುದು.

* ಉತ್ತರ ಮತ್ತು ಈಶಾನ್ಯವು ನೀರಿನ ಪ್ರಾಬಲ್ಯವಿರುವ ದಿಕ್ಕುಗಳಾಗಿವೆ. ತರಕಾರಿಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು, ಸಿಂಕ್ ಅನ್ನು ಅಡುಗೆಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಕುಡಿಯುವ ನೀರನ್ನು ಈಶಾನ್ಯದಲ್ಲಿ ಇಡಬೇಕು. 

* ಈಶಾನ್ಯ ದಿಕ್ಕಿನಲ್ಲಿ ಇಟ್ಟಿರುವ ನೀರು ಜೀರ್ಣಕ್ರಿಯೆಗೆ ಉತ್ತಮವೆಂದು ಹೇಳಲಾಗುವುದು. ಆದಷ್ಟೂ ಅಡುಗೆ ಮನೆಯ ಈಶಾನ್ಯ ಮೂಲೆಯಲ್ಲಿ ಕುಡಿಯುವ ನೀರಿನ ಪಿಚ್ಚರ್, ಆರ್ಒ ಇತ್ಯಾದಿ ವ್ಯವಸ್ಥೆ ಮಾಡಿ. ಅಡುಗೆಮನೆಯ ಪೂರ್ವ ಗೋಡೆಯ ಉದ್ದಕ್ಕೂ ಒಲೆ, ಓವನ್ ಅಥವಾ ಸ್ಟೌವ್ ಇದ್ದರೆ ಒಳ್ಳೆಯದು. 

* ಮನೆಯ ಮುಖ್ಯ ಬಾಗಿಲು ಎದುರಾಗಿ ಅಡುಗೆಮನೆಯ ಪ್ರವೇಶದ್ವಾರ ಇರಬಾರದು. ಕಿಟಕಿ, ಶೌಚಾಲಯದ ಸ್ಥಳ, ಮಲಗುವ ಕೋಣೆಯ ಬಾಗಿಲು, ಹಾಸಿಗೆ ಅಥವಾ ಮೆಟ್ಟಿಲುಗಳು ಇತ್ಯಾದಿಗಳು ಒಲೆಯ ಭಾಗದಲ್ಲಿ ಬರಬಾರದು. 

* ಅಡುಗೆಮನೆಯಲ್ಲಿ ಸಾಕಷ್ಟು ಆಹಾರ ಪದಾರ್ಥಗಳು ಇರಬೇಕು. ಇದು ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಹೆಚ್ಚಿಸುತ್ತದೆ. ಇನ್ನು ನೀವು ಆಹಾರ ಪದಾರ್ಥಗಳನ್ನು ಇಡಲು ದಕ್ಷಿಣ ಮತ್ತು ಪಶ್ಚಿಮ ಗೋಡೆಯ ಉದ್ದಕ್ಕೂ ಕಬೋರ್ಡ್ ಇಡುವುದು ಒಳ್ಳೆಯದು. 

* ಧಾನ್ಯಗಳು, ತುಪ್ಪ, ಎಣ್ಣೆ, ಸಾಂಬಾರ ಪದಾರ್ಥಗಳು, ಸಕ್ಕರೆ, ಬೇಳೆಕಾಳುಗಳು, ಅಕ್ಕಿ ಮುಂತಾದ ದೈನಂದಿನ ಬಳಕೆಯ ವಸ್ತುಗಳನ್ನು ಈ ಕಪಾಟಿನಲ್ಲಿ ಇಡಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬೇಡಿ. ಲೋಹ ಅಥವಾ ಗಾಜಿನ ಪಾತ್ರೆಗಳನ್ನು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಉತ್ತಮವೆಂದು ಪರಿಗಣಿಸಲಾಗುವುದು. 

* ಫ್ರಿಡ್ಜ್ ಅಡುಗೆ ಮನೆಯ ಉತ್ತರ ಮತ್ತು ಪಶ್ಚಿಮ ಗೋಡೆಯ ಉದ್ದಕ್ಕೂ ಇಡಬೇಕು. ನೀವು ರೆಫ್ರಿಜರೇಟರ್ ಅನ್ನು ಬಳಸದಿದ್ದರೆ ಹಾಲು, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಉತ್ತರ ಮತ್ತು ಈಶಾನ್ಯದ ನಡುವೆ ಇರಿಸಿ. ಈ ದಿಕ್ಕಿನಲ್ಲಿ, ಆಹಾರ ಪದಾರ್ಥಗಳನ್ನು ಗರಿಷ್ಠ ಸಮಯದವರೆಗೆ ಸಂರಕ್ಷಿಸುವ ನೈಸರ್ಗಿಕ ಸಾಮರ್ಥ್ಯವಿದೆ. 

* ಅಡುಗೆ ಮನೆಯ ಒಳಾಂಗಣ ಅಲಂಕಾರವು ತೆಳು ಬಣ್ಣದಲ್ಲಿ ಇರಬೇಕು. ಆದಷ್ಟು ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಕಲ್ಲು ಅಥವಾ ಟೈಲ್ಸ್ ಬಳಸಬಾರದು. ಸೌಮ್ಯವಾದ, ಆಹ್ಲಾದಕರ ಮತ್ತು ಪೌಷ್ಟಿಕ ಬಣ್ಣಗಳ ಬಳಕೆ ಯಾವಾಗಲೂ ಅಡುಗೆಮನೆಗೆ ಒಳ್ಳೆಯದು. 

* ಅಡುಗೆ ಮನೆ ಯಾವಾಗಲೂ ಸ್ವಚ್ಛ ಮತ್ತು ಶುದ್ಧವಾಗಿ ಇಡಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಡುವುದರಿಂದ ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ, ಆರೋಗ್ಯದ ದೃಷ್ಟಿಯಿಂದಲೂ ಅಡುಗೆ ಮನೆ ಸ್ವಚ್ಛವಾಗಿದ್ದರೆ ಒಳ್ಳೆಯದು.

* ಇನ್ನುಅಡುಗೆ ಮನೆ ನಾವು ಅಡುಗೆ ಮಾಡುವಂಥ ಸ್ಥಳ, ಅದು ಶುದ್ಧವಾಗಿದ್ದರೆ ಮನಸ್ಸು ಖುಷಿಯಾಗಿರುತ್ತದೆ, ಖಲೀಜಾಗಿರುವ ಅಡುಗೆ ಮನೆಯಲ್ಲಿ ಅಡುಗೆ ಮಾಡಿದರೆ ತಿನ್ನಬೇಕೆನಿಸುವುದಿಲ್ಲ ಅಲ್ವಾ? ಇನ್ನು ಅಡುಗೆ ಮನೆಯಲ್ಲಿ ಲೈಟ್ ವ್ಯವಸ್ಥೆ ಚೆನ್ನಾಗಿರಬೇಕು, ಇದು ನಂಬಿಕೆ ಮಾತ್ರವಲ್ಲ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದು, ಲೈಟ್ ಚೆನ್ನಾಗಿದ್ದರೆ ಅಡುಗೆಯಲ್ಲಿ ಏನಾದರೂ ಬಿದ್ದರೂ ಕಾಣುತ್ತೆ.